Thursday, May 24, 2012

ವಸಂತ ಮರುಕಳಿಸಿದಾಗ ಕಮರಿದ ಕನಸಿನ ನೆನಪೇಕೆ?


Should Not Live In The Memory Of Past Love Aid0202
ಪ್ರೀತಿಸಿದ ವ್ಯಕ್ತಿ ಬಾಳಸಂಗಾತಿಯಾಗಿ ಸಿಗಬಹುದು, ಸಿಗದೇ ಇರಬಹುದು. ಆದರೆ ಮೊದಲ ಲವ್ ಮರೆಯಲು ಯಾರಿಂದಲೂ ಸಾಧ್ಯವಿಲ್ಲ. ಹಾಗಂತ ಅದೇ ನೆನಪಿನಲ್ಲಿ ನಂತರದ ಸುಂದರವಾದ ಬದುಕನ್ನು ಕೈಯಾರೆ ಹಾಳು ಮಾಡುವುದು ಸರಿನಾ?

ನಾವು ಪ್ರೀತಿಸಿದ ಅಥವಾ ಮದುವೆಯಾಗುವ ವ್ಯಕ್ತಿ ಈ ಹಿಂದೆ ಯಾರನ್ನೊ ಪ್ರೀತಿಸಿ ಯಾವುದೊ ಕಾರಣಕ್ಕೆ ಅವರು ಒಂದಾಗದೆ ಹೋಗಿರಬಹುದು. ಶಿಶಿರದಲ್ಲಿ ಮರದಿಂದ ಎಲೆಗಳು ಉದುರಿ ವಸಂತದಲ್ಲಿ ಹೊಸ ಎಲೆ ಮತ್ತು ಹೂಗಳಿಂದ ಮರಗಳು ಕಂಗೊಳಿಸುತ್ತವೆ. ಅದೇ ರೀತಿ ನಮ್ಮ ಬದುಕಿನಲ್ಲಿ ಪುನಃ ಚಿಗುರಿದ ವಸಂತವನ್ನು ಹಾಳುಮಾಡುವುದು ದಡ್ಡತನದ ಪರಾಮಾವಧಿಯಲ್ಲದೆ ಮತ್ತೇನು?

ಇದ್ಹೇಕೆ ಹೇಳುತ್ತಿದ್ದೇನೆ ಅಂದರೆ ನನ್ನ ಗೆಳಯನ ಚಿಗುರು ಹೊಡೆಯ ಬೇಕಾದ ಪ್ರೇಮ ಮೊಗ್ಗಿನಲ್ಲಿಯೆ ಬಾಡಿ ಹೋಯಿತು. ಅವನು ಮಾಡಿದಿಷ್ಟೆ, ಅವನಿಗೆ ಈ ಹಿಂದೆ ಒಂದು ಹುಡುಗಿಯ ಜೊತೆ ಪ್ರೀತಿ ಇದೆಯೆಂದು ಹೇಳಿದ. ಇವನನ್ನು ತುಂಬಾ ಪ್ರೀತಿಸುತ್ತಿದ್ದ ಈ ಹುಡುಗಿ ಅದೆಲ್ಲಾ ಕಳೆದು ಹೋದ ಕತೆ ಇನ್ನು ಮುಂದೆ ನಮ್ಮ ಬದುಕಿನ ಬಗ್ಗೆ ಕನಸು ಕಾಣೋಣ ಅಂದಳು. ಆದರೆ ಈ ಮಾರಾಯನಿಗೆ ಯಾವತ್ತು ನೋಡಿದರೂ ದೂರ ಹೋದವಳದ್ದೇ ಗುಣಗಾನ. ಇವಳು ಏನೇ ಪ್ರೀತಿಯಿಂದ ಹೇಳಿದರೂ ಅವಳು ಹಾಗೆ ಹೇಳಿದ್ದಳು, ಹೀಗೆ ಹೇಳುತ್ತಿದ್ದಳು ಅಂತ ಶುರು ಹಚ್ಚಿಕೊಳ್ಳುತ್ತಿದ್ದ.

ಕಳೆದು ಹೋದ ಪ್ರೀತಿಯ ಕನವರಿಕೆಯಲ್ಲಿ ಎದುರಿನಲ್ಲಿರುವ ಪ್ರೀತಿಯ ಹುಡುಗಿಯ ಪ್ರೀತಿಯ ಆಳವನ್ನು ಅರೆಯದೆ ಹೋದ. ಅವಳೂ ಅವನ ಬಿಟ್ಟು ಬಹು ದೂರ ಹೋದಳು. ನನಗೆ ಅವಳ ಬಗ್ಗೆ ಕೋಪ ಬಂತು. ಆದರೆ ಒಮ್ಮೆ ಅವಳು ಸಿಕ್ಕದಾಗ ಹೇಳಿದಳು. ನಾನು ಮುಂದೆ ಬಾಳಬೇಕಾದ ಜೀವನದ ಬಗ್ಗೆ ಕನಸು ಕಾಣುತ್ತಿದ್ದೆ, ಆದರೆ ಅವನು ಗತಕಾಲದ ಕನಸಿನಲ್ಲಿದ್ದೆ. ನನಗೆ ನನ್ನ ಕನಸು ಕಮರಿಹೋಗುವುದು ಇಷ್ಟವಿಲ್ಲ ಎಂದಳು!

ನಮ್ಮ ಬಾಳ ಸಂಗಾತಿಗೆ ಜೊತೆ ಸಂತೋಷವಾಗಿ ಇರುವ ಸಮಯದಲ್ಲಿ ಅವಳ /ಅವನ ವಸ್ತುಗಳನ್ನು ನೆನಪಿನ ಕಾಣಿಕೆಯೆಂಬಂತೆ ಇಟ್ಟುಕೊಳ್ಳುವುದು ಅಥವಾ ಅವರ ಮಾಜಿ ಪ್ರೇಮಿಯ ಬಗ್ಗೆ ಮಾತನಾಡುವುದು ಯಾರಿಗೂ ಇಷ್ಟವಾಗುವುದಿಲ್ಲ.

ಮದುವೆಯಾದ ನಂತರ ನಿಮ್ಮ ಹೆಂಡತಿ/ ಗಂಡ ಅತಿ ಪ್ರೀತಿ ತೋರಿಸುವಾಗ ಕಮರಿಹೋದ ಪ್ರೀತಿಯ ಹುಡುಕಾಟದಲ್ಲಿ ನೀವಿದ್ದರೆ ನಿಮ್ಮ ಈ ಸಂಬಂಧ ಕೂಡ ದುರ್ಬಲವಾಗುವುದು.

ಇವನು ನನ್ನ ಪ್ರೀತಿಗೆ ಮೋಸ ಮಾಡಬಹುದೇ?


ಇವನು ನನ್ನ ಪ್ರೀತಿಗೆ ಮೋಸ ಮಾಡಬಹುದೇ?

Whether He Ready To Be My Husband

ಪ್ರೀತಿಸಿದ ಹುಡುಗ ಮೋಸ ಮಾಡಿದ ಎಂಬ ಸುದ್ಧಿ ಕೇಳಿದಾಗ ಅಥವಾ ನಮ್ಮ ಗೆಳತಿಯರಿಗೆ ಆ ರೀತಿ ಉಂಟಾದಾಗ ಪ್ರೀತಿಯಲ್ಲಿರುವ ಹೆಣ್ಣು ಮಕ್ಕಳಿಗೆ ಭಯ ಮತ್ತು ಸಂಶಯ ಪ್ರಾರಂವಾಗುತ್ತದೆ. 'ಇವನು ನನ್ನ ಪ್ರೀತಿಗೆ ಮೋಸ ಮಾಡಬಹುದೇ?' ಎಂಬ ಭಯ ಕಾಡಲಾರಂಭಿಸುತ್ತದೆ. ಅವನನ್ನು ಕೇಳಿದರೆ 'ನಿನ್ನ ಬಿಟ್ಟು ಬೇರೆ ಹುಡುಗಿಯನ್ನು ಮದುವೆಯಾಲ್ಲ' ಅಂತ ಪ್ರಮಾಣ ಮಾಡಿ ಹೇಳುತ್ತಾನೆ. ಆದರೂ ಸಂಶಯ ಕಡಿಮೆಯಾಗಲ್ಲ ಏಕೆಂದರೆ ಅವರ ಗೆಳತಿಗೆ ಮೋಸ ಮಾಡಿದ ಹುಡುಗ ಕೂಡ ಇದೇ ರೀತಿ ಹೇಳಿದ್ದ ಅಂತ ನೆನಪಾಗುತ್ತದೆ.

ನಿಮ್ಮ ಹುಡುಗ ನಿಮ್ಮನ್ನು ತುಂಬಾ ಪ್ರೀತಿಸುತ್ತಿದ್ದು, ನಿಮ್ಮನ್ನೇ ಮದುವೆಯಾಗಬೇಕೆಂದು ಬಯಸುತ್ತಿದ್ದರೆ ಅದನ್ನು ಅವನ ನಡುವಳಿಕೆಯಲ್ಲಿ ಕಂಡು ಹಿಡಿಯಬಹುದು. ನಿಮ್ಮ ಹುಡುಗ ಈ ಕೆಳಗಿನಂತೆ ವರ್ತಿಸುತ್ತಿದ್ದರೆ ಅವನು ನಿಮಗೆ ಮೋಸ ಮಾಡಲ್ಲ ಅಂತ ಧೈರ್ಯ ತಂದುಕೊಳ್ಳಬಹುದು.

1.ಗಂಡನ ರೀತಿ ನಡೆದುಕೊಳ್ಳುತ್ತಾನೆ:
 ಗಂಡನ ರೀತಿ ವರ್ತಿಸಲಾರಂಭಿಸಿದ ಅಂದರೆ ನಿಮ್ಮ ಬಗ್ಗೆ ತುಂಬಾ ಪೊಸೆಸಿವ್ ಆಗುತ್ತಾನೆ. ನಿಮ್ಮ ಬಗ್ಗೆ ತುಂಬಾ ಕಾಳಜಿ ತೋರಿಸುತ್ತಾನೆ. ನಿಮ್ಮ ಫ್ರೆಂಡ್ಸ್ ಅಥವಾ ಆಫೀಸ್ ನಲ್ಲಿ ಜೊತೆಯಲ್ಲಿ ಕೆಲಸ ಮಾಡುವವರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಪ್ರಯತ್ನಿಸುತ್ತಾನೆ. ನಿಮ್ಮ ಚಟುವಟಿಕೆಗಳ ಬಗ್ಗೆ ಗಮನ ಇಟ್ಟಿರುತ್ತಾನೆ. ತನ್ನ ಬಾಳ ಸಂಗಾತಿ ಆಯ್ಕೆ ಬಗ್ಗೆ ಗಂಡಸರು ಹೆಚ್ಚು ಜಾಗೃತಿ ವಹಿಸುತ್ತಾರೆ.

2. ಮುಖ್ಯವಾದ ದಿನಗಳನ್ನು ನೆನಪಿನಲ್ಲಿಟ್ಟು ಕೊಂಡಿರುತ್ತಾನೆ:ನಿಮಗೆ ಮೊದಲು ಪ್ರಪೋಸ್ ಮಾಡಿದ ದಿನ, ನೀವು ಇಬ್ಬರು ಮೊದಲು ಸಿನಿಮಾಕ್ಕೆ ಹೋದ ನೆನಪಿಡದಿದ್ದರೂ, ಒಂದು ವೇಳೆ ಹುಷಾರಿಲ್ಲದಿದ್ದರೆ ಡಾಕ್ಷರ್ ಚಿಕಿತ್ಸೆಗೆ ಬರಲಿಕ್ಕೆ ಹೇಳಿದ ದಿನ, ಸಂದರ್ಶನಕ್ಕೆ ಹೋಗಬೇಕಾದ ದಿನ, ನಿಮ್ಮ ತಿಂಗಳ ದಿನ ಹೀಗೆ ಮುಖ್ಯವಾದ ದಿನಗಳನ್ನು ನೆನಪಿನಲ್ಲಿಟ್ಟುಕೊಂಡಿರುತ್ತಾರೆ.

3. ಭಾವನೆಗಳನ್ನು ಅಭಿವ್ಯಕ್ತಿ ಮತ್ತು ಆರೈಕೆ: ಅವನಿಗೆ ಇಷ್ಟವಾದರೆ, ಬೇಜಾರಾದರೆ ಪ್ರತಿಯೊಂದನ್ನು ನಿಮಗೆ ಹೇಳಿಕೊಳ್ಳವುದು, ನಿಮ್ಮ ಭಾವನೆಗಳಿಗೆ ಬೆಲೆ ಕೊಡುವುದು, ನಿಮ್ಮ ಬೇಕು ಬೇಡಗಳನ್ನು ಗಮನಿಸುವುದು ಮಾಡುತ್ತಿದ್ದರೆ ಅವರು ನಿಮ್ಮನ್ನು ಬಾಳಸಂಗಾತಿಯಾಗಿ ಬಯಸುತ್ತಿದ್ದಾರೆ ಎಂದು ಅರ್ಥ.

4. ಯಾವುದೇ ವಿಷಯವನ್ನು ಬಚ್ಚಿಟ್ಟುಕೊಳ್ಳದಿರುವುದು: ನಿಮ್ಮ ಜೊತೆಯ ಸಂಬಂಧವನ್ನು ಮನೆಯವರ ಗೆಳೆಯರ ಹತ್ತಿರ ಬಚ್ಚಿಡಲು ಪ್ರಯತ್ನಿಸದಿರುವುದು, ನಿಮ್ಮನ್ನು ಇಷ್ಟ ಪಡುತ್ತಿರುವ ವಿಷಯವನ್ನು ಮನೆಯಲ್ಲಿ ಹೇಳುವುದು, ನಿಮಗೆ ಅವರ ಮನೆಯವರ ಬಗ್ಗೆ, ಮನೆ ಬಗ್ಗೆ ಪ್ರತಿಯೊಂದು ವಿಷಯವನ್ನು ಹೇಳುವುದು ಮಾಡುತ್ತಿದ್ದರೆ ಅವರು ನಿಮ್ಮನ್ನು ಅವರ ಮನೆಯ ಸದಸ್ಯರಾಗಲು ಬಯಸುತ್ತಿದ್ದರೆ ಎಂಬುದು ವ್ಯಕ್ತವಾಗುತ್ತದೆ.

5. ನಿಮ್ಮ ಕರೆಯನ್ನು ಎಲ್ಲಾ ಸಮಯದಲ್ಲಿ ಸ್ವೀಕರಿಸುವುದು: 
ಕೆಲವೊಂದು ಮುಖ್ಯವಾದ ಸಮಯದಲ್ಲಿ ಬಿಟ್ಟರೆ ನೀವು ಕರೆ ಮಾಡಿದಾಗ ನಿಮ್ಮ ಕರೆಯನ್ನು ಸ್ವೀಕರಿಸುತ್ತಿದ್ದರೆ ಅಥವಾ ನಿಮ್ಮ ಕರೆಯನ್ನು ಮನೆಯವರ, ಗೆಳೆಯರ ಮುಂದೆ ಸ್ವೀಕರಿಸುವ ಧೈರ್ಯ ತೋರಿಸುತ್ತಿದ್ದಾರೆ ಎಂದರೆ ಅವರು ನಿಮಗೆ ಮೋಸ ಮಾಡುವುದದಿಲ್ಲ ಎಂಬ ಧೈರ್ಯ ತಾಳಬಹುದು.

6. ನಿಮ್ಮ ನಿರ್ಧಾರಗಳಲ್ಲಿ ಭಾಗಿಯಾಗುವುದು: ನಿಮ್ಮ ದೃಷ್ಟಿಕೋನ, ನಿಮ್ಮ ನಿರ್ಧಾರಗಳಲ್ಲಿ ಭಾಗಿಯಾಗುವುದು, ನಿಮ್ಮ ನಿರ್ಧಾರ ಸರಿಯಿಲ್ಲದಿದ್ದರೆ ಅದನ್ನು ಎತ್ತಿ ತೋರಿಸುವ ಪ್ರಯತ್ನ ಮಾಡಿದರೆ ಅವರು ನಿಮ್ಮ ಬಗ್ಗೆ ತುಂಬಾ ಕಾಳಜಿ ಹೊಂದಿದ್ದಾರೆ ಎಂದು ಸಂತೋಷ ಪಡಿ.

7. ನಿಮ್ಮ ಭಾವನೆ ಮತ್ತು ಮನೆಯವರ ಬಗ್ಗೆ ಗೌರವ ಕೊಡುವುದು: ನಿಮ್ಮ ಇಷ್ಟ-ಕಷ್ಟಗಳನ್ನು ತಿಳಿದುಕೊಂಡು ಅದರಂತೆ ನಡೆಯಲು ಪ್ರಯತ್ನಿಸುವುದು, ನಿಮ್ಮ ಭಾವನೆಗಳಿಗೆ ಬೆಲೆ ಕೊಡುವುದು, ನಿಮ್ಮ ಮನೆಯವರ ಬಗ್ಗೆ ತಿಳಿದುಕೊಳ್ಳುವುದು ಮತ್ತು ಗೌರವವನ್ನು ನೀಡುತ್ತಿದ್ದರೆ ನಿಮ್ಮ ಪ್ರೇಮಿ ನಿಮಗೆ ಮೋಸ ಮಾಡುವ ಚಿಂತೆ ಕೂಡ ಮಾಡುವುದಿಲ್ಲವೆಂದು ದೃಢವಾಗಿ ಹೇಳಬಹುದು.

ಪ್ರೀತಿಸುತ್ತಿದ್ದೇನೆ ಎಂದು ಒಬ್ಬ ಹುಡುಗ ಹೇಳಿದರೆ ಅವನನ್ನು ಪುರ್ತಿಯಾಗಿ ನಂಬಿ ಮೋಸ ಹೋಗುವ ಬದಲು ಅವನು ನಿಜವಾಗಲೂ ನಿಮ್ಮಪ್ರೀತಿಗೆ ಅರ್ಹನೇ ಅನ್ನುವುದನ್ನು ಪರೀಕ್ಷಿಸಿ, ಅವನ ಮತ್ತು ಅವನ ಮನೆಯವರ ಹಿನ್ನಲೆ ತಿಳಿದುಕೊಳ್ಳಲು ಪ್ರಯತ್ನಿಸಿ, ಆಗ ಮೋಸ ಹೋಗುವುದನ್ನು ತಪ್ಪಿಸಬಹುದು.

ನನ್ನ ಅರ್ಥೈಸಿಕೊಂಡಿದ್ದರೆ ಈ ರೀತಿ ಮಾಡಬೇಡ!


ನನ್ನ ಅರ್ಥೈಸಿಕೊಂಡಿದ್ದರೆ ಈ ರೀತಿ ಮಾಡಬೇಡ!

ನನ್ನನ್ನು ನಿನಗಿಂತ ಮಿಗಿಲಾಗಿ ಪ್ರೀತಿಸುವ ನನ್ನ ಮುದ್ದಿನ ಪ್ರೇಮಿಯೆ ನಿಮಗೊಂದು ಮಾತು ತುಂಬಾ ದಿನಗಳಿಂದ ಹೇಳಬೇಕು ಇದ್ದೆ. ಆದರೆ ನೀನೆ ಅರ್ಥೈಸಿಕೊಳ್ಳುತ್ತೀಯ ಅಂತ ಹೇಳಲಿಲ್ಲ. ಆದರೆ ಈಗಲೂ ಹೇಳದಿದ್ದರೆ ಎಲ್ಲಿ ನಮ್ಮ ಸಂಬಂಧಗಳು ಕಡಿದು ಹೋಗುತ್ತದೆಯೊ ಎಂಬ ಭಯದಿಂದ ಹೇಳುತ್ತಿದ್ದೇನೆ. ಇದು ನಿನಗೆ ಮಾತ್ರ ಅಲ್ಲ, ಪ್ರತಿಯೊಬ್ಬ ಪ್ರೇಮಿಯೂ ತಿಳಿದುಕೊಳ್ಳಬೇಕಾದ ವಿಷಯವಾಗಿರುವುದರಿಂದ ಹೇಳುತ್ತಿದ್ದೇನೆ.

ಪ್ರತಿಬಾರಿ ನೀನು ಹೇಳುತ್ತೀಯಾ ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀಯಾ ಅಂತ, ಬೇಜಾರು ಮಾಡಿಕೊಳ್ಳಬೇಡ ಒಂದು ವಿಷಯ ಹೇಳುತ್ತೇನೆ ನೀನು ನನ್ನನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿಲ್ಲ! ಅರ್ಥ ಮಾಡಿಕೊಂಡಿದ್ದರೆ ಈ ಕೆಳಗಿನಂತೆ ಮಾಡುತ್ತಿರಲಿಲ್ಲ. ಇದನ್ನು ಓದಿದ ಮೇಲೆ ಕೋಪಗೊಳ್ಳುವುದಿಲ್ಲ,ಬೇಸರಪಡುವುದಿಲ್ಲ, ನಮ್ಮ ಪ್ರೀತಿ ಮತ್ತಷ್ಟು ಗಟ್ಟಿಯಾಗುತ್ತದೆ ಎಂಬ ವಿಶ್ವಾಸ ನನಗೆ ಇದೆ. ಏಕೆಂದರೆ ನನ್ನ ಪ್ರೇಮಿಯ ಮನಸ್ಸು ನನಗೆ ಗೊತ್ತು ಚಿನ್ನಾ...

0502 do you know very well about me aid0202

 ನನ್ನ ಫೋನ್ ತೆಗೆದು ಪರೀಕ್ಷಿಸುವುದು: ನಾನು ಎಂತಹ ವ್ಯಕ್ತಿ ಅಂತ ನಿನಗೆ ಗೊತ್ತಿದೆ, ಮತ್ತೆ ಏಕೆ ನನ್ನ ಫೋನು ತೆಗೆದು ಪರೀಕ್ಷಿಸುತ್ತೀಯಾ? ನನ್ನ ಪ್ರೀತಿಯ ಮೇಲೆ ನಂಬಿಕೆ ಇಲ್ವಾ? ನನ್ನ ನಂಬುದಾದರೆ, ನನ್ನ ಪ್ರೀತಿ ನಂಬುದಾದರೆ ಈ ರೀತಿ ಮಾಡಬೇಡ.

ಪಾದರಕ್ಷೆಗಳನ್ನು ಗಿಫ್ಟ್ ಮಾಡಬೇಡ: ಹೌದು ನೀನು ಪ್ರೀತಿಯಿಂದ ತಂದುಕೊಟ್ಟ ಪಾದರಕ್ಷೆ ತುಂಬಾ ಚೆನ್ನಾಗಿದ್ದರೂ ನೀನು ಅದನ್ನು ಗಿಫ್ಟ್ ಮಾಡಿದ್ದು ನನಗೆ ಇಷ್ಟವಾಗಲಿಲ್ಲ, ಅದರ ಬದಲು ನೀನು ನನ್ನನ್ನು ಚಪ್ಪಲಿ ಅಂಗಡಿಗೆ ಕರೆದುಕೊಂಡು ಹೋಗಿ ಕೊಡಿಸಬಹುದಿತ್ತು. ಇರಲಿ ಇನ್ನು ಮೇಲೆ ಹಾಗೆ ಮಾಡಬೇಡ. ಕೊಡಿಸುವುದಾದರೆ ಅಂಗಡಿಗೆ ಕೊಂಡೊಯ್ದು ಕೊಡಿಸು, ಇದು ಮಾತ್ರ ಸರ್‌ಫ್ರೈಸ್ ಆಗಿ ಕೊಡಬೇಡ. ಯಾವ ವ್ಯಕ್ತಿಯೂ ತನ್ನ ಪ್ರೇಮಿಗೆ ಚಪ್ಪಲಿ ಗಿಫ್ಟ್ ಕೊಡುವುದು ಸರಿಯಲ್ಲ ಅಂತ ನನ್ನ ಅನಿಸಿಕೆ.

ಪ್ರೀತಿಯಿಂದ ಉಸಿರ ಕಟ್ಟಿಸಬೇಡ: ನಿನಗೆ ನನ್ನ ಮೇಲೆ ತುಂಬಾ ಪ್ರೀತಿಯಿದೆ ಅಂತ ಗೊತ್ತು. ಆದರೆ ಆ ಪ್ರೀತಿಯಲ್ಲಿ ನನ್ನ ಉಸಿರು ಕಟ್ಟುವಂತೆ ಮಾಡಬೇಡ. ದಿನದ ಇಪ್ಪತ್ನಾಕು ಗಂಟೆ ನಿನ್ನೊಡನೆ ಮಾತ್ರ ಮಾತನಾಡುತ್ತಾ ಇರಬೇಕು ಅಂತ ನೀನು ಬಯಸುವುದು ತಪ್ಪು. ನೀನು ಆ ರೀತಿ ಮಾಡಿದಾಗ ನಿನ್ನ ಪ್ರೀತಿಗೆ ನನಗೆ ಉಸಿರು ಕಟ್ಟಿದಂತೆ ಭಾಸವಾಗುತ್ತದೆ. ಏನೂ ಬೇಡ ಎಲ್ಲಾ ಬಿಟ್ಟು ಓಡಿಹೋಗಬೇಕೆನಿಸುತ್ತದೆ. ಆದರೆ ಮರುಕ್ಷಣ ನಿನ್ನ ಪ್ರೀತಿ ತುಂಬಿದ ಕಣ್ಣುಗಳು ನೆನೆಪಾಗುತ್ತದೆ. 

ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ಆದರೆ ನನಗೆ ಅಂತ ಸ್ವಲ್ಪ ಸಮಯ ಕೊಡಬೇಕು. ಎಲ್ಲಾ ಸಮಯ ನಿನ್ನ ಜೊತೆ ಇರಬೇಕೆಂದು ನೀನು ಬಯಸುವುದಾದರೆ ಅಂತಹ ಸಂಬಂದ ಗಟ್ಟಿಯಾಗುವುದಿಲ್ಲ. ಅದರ ಬದಲು ಸಂಶಯ ಪ್ರವೃತಿ ಎದ್ದು ಕಾಣುತ್ತದೆ. ಎಲ್ಲಿ ಸಂಶಯವಿರುತ್ತೊ ಅಲ್ಲಿ ಉತ್ತಮವಾದ ಸಂಬಂಧವಿರುವುದಿಲ್ಲ!

ನನಗೆ ಇಷ್ಟವಿಲ್ಲದ ವಿಷಯಗಳ ಬಗ್ಗೆ ನೆನಪಿಸಬೇಡ: ನನ್ನನ್ನು ಚೆನ್ನಾಗಿ ಅರ್ಥೈಸಿಕೊಂಡಿರುವೆ ಎಂಬ ನಂಬಿಕೆಯಿಂದ ಹೇಳುತ್ತಿದ್ದೇನೆ ನನಗೆ ಯಾವುದು ಇಷ್ಟ, ಯಾವುದು ಇಷ್ಟವಿಲ್ಲ ಅಂತ ನಿನಗೆ ಚೆನ್ನಾಗಿ ಗೊತ್ತಿದೆ. ಆದ್ದರಿಂದ ನನಗೆ ಇಷ್ಟವಾಗದ ವಿಷಯಗಳ ಬಗ್ಗೆ ಹೇಳ ಬೇಡ ಪ್ಲೀಸ್...

ಇದೇ ಅಂಶಗಳನ್ನು ಪ್ರತಿಯೊಬ್ಬ ಪ್ರೇಮಿ ಅನುಸರಿಸಿದ್ದೇ ಆದರೆ ಪ್ರೀತಿ ಮತ್ತಷ್ಟು ಗಟ್ಟಿಯಾಗಿ ಸಂಬಂಧಗಳು ಮಧುರವಾಗಿರುತ್ತದೆ. ನಮ್ಮ ಸಂಬಂಧ ಮತ್ತಷ್ಟು ಗಟ್ಟಿಯಾಗಲು ನಾವು ಏಕೆ ಬದಲಾಗಬಾರದು?