Thursday, May 24, 2012

ನನ್ನ ಅರ್ಥೈಸಿಕೊಂಡಿದ್ದರೆ ಈ ರೀತಿ ಮಾಡಬೇಡ!


ನನ್ನ ಅರ್ಥೈಸಿಕೊಂಡಿದ್ದರೆ ಈ ರೀತಿ ಮಾಡಬೇಡ!

ನನ್ನನ್ನು ನಿನಗಿಂತ ಮಿಗಿಲಾಗಿ ಪ್ರೀತಿಸುವ ನನ್ನ ಮುದ್ದಿನ ಪ್ರೇಮಿಯೆ ನಿಮಗೊಂದು ಮಾತು ತುಂಬಾ ದಿನಗಳಿಂದ ಹೇಳಬೇಕು ಇದ್ದೆ. ಆದರೆ ನೀನೆ ಅರ್ಥೈಸಿಕೊಳ್ಳುತ್ತೀಯ ಅಂತ ಹೇಳಲಿಲ್ಲ. ಆದರೆ ಈಗಲೂ ಹೇಳದಿದ್ದರೆ ಎಲ್ಲಿ ನಮ್ಮ ಸಂಬಂಧಗಳು ಕಡಿದು ಹೋಗುತ್ತದೆಯೊ ಎಂಬ ಭಯದಿಂದ ಹೇಳುತ್ತಿದ್ದೇನೆ. ಇದು ನಿನಗೆ ಮಾತ್ರ ಅಲ್ಲ, ಪ್ರತಿಯೊಬ್ಬ ಪ್ರೇಮಿಯೂ ತಿಳಿದುಕೊಳ್ಳಬೇಕಾದ ವಿಷಯವಾಗಿರುವುದರಿಂದ ಹೇಳುತ್ತಿದ್ದೇನೆ.

ಪ್ರತಿಬಾರಿ ನೀನು ಹೇಳುತ್ತೀಯಾ ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀಯಾ ಅಂತ, ಬೇಜಾರು ಮಾಡಿಕೊಳ್ಳಬೇಡ ಒಂದು ವಿಷಯ ಹೇಳುತ್ತೇನೆ ನೀನು ನನ್ನನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿಲ್ಲ! ಅರ್ಥ ಮಾಡಿಕೊಂಡಿದ್ದರೆ ಈ ಕೆಳಗಿನಂತೆ ಮಾಡುತ್ತಿರಲಿಲ್ಲ. ಇದನ್ನು ಓದಿದ ಮೇಲೆ ಕೋಪಗೊಳ್ಳುವುದಿಲ್ಲ,ಬೇಸರಪಡುವುದಿಲ್ಲ, ನಮ್ಮ ಪ್ರೀತಿ ಮತ್ತಷ್ಟು ಗಟ್ಟಿಯಾಗುತ್ತದೆ ಎಂಬ ವಿಶ್ವಾಸ ನನಗೆ ಇದೆ. ಏಕೆಂದರೆ ನನ್ನ ಪ್ರೇಮಿಯ ಮನಸ್ಸು ನನಗೆ ಗೊತ್ತು ಚಿನ್ನಾ...

0502 do you know very well about me aid0202

 ನನ್ನ ಫೋನ್ ತೆಗೆದು ಪರೀಕ್ಷಿಸುವುದು: ನಾನು ಎಂತಹ ವ್ಯಕ್ತಿ ಅಂತ ನಿನಗೆ ಗೊತ್ತಿದೆ, ಮತ್ತೆ ಏಕೆ ನನ್ನ ಫೋನು ತೆಗೆದು ಪರೀಕ್ಷಿಸುತ್ತೀಯಾ? ನನ್ನ ಪ್ರೀತಿಯ ಮೇಲೆ ನಂಬಿಕೆ ಇಲ್ವಾ? ನನ್ನ ನಂಬುದಾದರೆ, ನನ್ನ ಪ್ರೀತಿ ನಂಬುದಾದರೆ ಈ ರೀತಿ ಮಾಡಬೇಡ.

ಪಾದರಕ್ಷೆಗಳನ್ನು ಗಿಫ್ಟ್ ಮಾಡಬೇಡ: ಹೌದು ನೀನು ಪ್ರೀತಿಯಿಂದ ತಂದುಕೊಟ್ಟ ಪಾದರಕ್ಷೆ ತುಂಬಾ ಚೆನ್ನಾಗಿದ್ದರೂ ನೀನು ಅದನ್ನು ಗಿಫ್ಟ್ ಮಾಡಿದ್ದು ನನಗೆ ಇಷ್ಟವಾಗಲಿಲ್ಲ, ಅದರ ಬದಲು ನೀನು ನನ್ನನ್ನು ಚಪ್ಪಲಿ ಅಂಗಡಿಗೆ ಕರೆದುಕೊಂಡು ಹೋಗಿ ಕೊಡಿಸಬಹುದಿತ್ತು. ಇರಲಿ ಇನ್ನು ಮೇಲೆ ಹಾಗೆ ಮಾಡಬೇಡ. ಕೊಡಿಸುವುದಾದರೆ ಅಂಗಡಿಗೆ ಕೊಂಡೊಯ್ದು ಕೊಡಿಸು, ಇದು ಮಾತ್ರ ಸರ್‌ಫ್ರೈಸ್ ಆಗಿ ಕೊಡಬೇಡ. ಯಾವ ವ್ಯಕ್ತಿಯೂ ತನ್ನ ಪ್ರೇಮಿಗೆ ಚಪ್ಪಲಿ ಗಿಫ್ಟ್ ಕೊಡುವುದು ಸರಿಯಲ್ಲ ಅಂತ ನನ್ನ ಅನಿಸಿಕೆ.

ಪ್ರೀತಿಯಿಂದ ಉಸಿರ ಕಟ್ಟಿಸಬೇಡ: ನಿನಗೆ ನನ್ನ ಮೇಲೆ ತುಂಬಾ ಪ್ರೀತಿಯಿದೆ ಅಂತ ಗೊತ್ತು. ಆದರೆ ಆ ಪ್ರೀತಿಯಲ್ಲಿ ನನ್ನ ಉಸಿರು ಕಟ್ಟುವಂತೆ ಮಾಡಬೇಡ. ದಿನದ ಇಪ್ಪತ್ನಾಕು ಗಂಟೆ ನಿನ್ನೊಡನೆ ಮಾತ್ರ ಮಾತನಾಡುತ್ತಾ ಇರಬೇಕು ಅಂತ ನೀನು ಬಯಸುವುದು ತಪ್ಪು. ನೀನು ಆ ರೀತಿ ಮಾಡಿದಾಗ ನಿನ್ನ ಪ್ರೀತಿಗೆ ನನಗೆ ಉಸಿರು ಕಟ್ಟಿದಂತೆ ಭಾಸವಾಗುತ್ತದೆ. ಏನೂ ಬೇಡ ಎಲ್ಲಾ ಬಿಟ್ಟು ಓಡಿಹೋಗಬೇಕೆನಿಸುತ್ತದೆ. ಆದರೆ ಮರುಕ್ಷಣ ನಿನ್ನ ಪ್ರೀತಿ ತುಂಬಿದ ಕಣ್ಣುಗಳು ನೆನೆಪಾಗುತ್ತದೆ. 

ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ಆದರೆ ನನಗೆ ಅಂತ ಸ್ವಲ್ಪ ಸಮಯ ಕೊಡಬೇಕು. ಎಲ್ಲಾ ಸಮಯ ನಿನ್ನ ಜೊತೆ ಇರಬೇಕೆಂದು ನೀನು ಬಯಸುವುದಾದರೆ ಅಂತಹ ಸಂಬಂದ ಗಟ್ಟಿಯಾಗುವುದಿಲ್ಲ. ಅದರ ಬದಲು ಸಂಶಯ ಪ್ರವೃತಿ ಎದ್ದು ಕಾಣುತ್ತದೆ. ಎಲ್ಲಿ ಸಂಶಯವಿರುತ್ತೊ ಅಲ್ಲಿ ಉತ್ತಮವಾದ ಸಂಬಂಧವಿರುವುದಿಲ್ಲ!

ನನಗೆ ಇಷ್ಟವಿಲ್ಲದ ವಿಷಯಗಳ ಬಗ್ಗೆ ನೆನಪಿಸಬೇಡ: ನನ್ನನ್ನು ಚೆನ್ನಾಗಿ ಅರ್ಥೈಸಿಕೊಂಡಿರುವೆ ಎಂಬ ನಂಬಿಕೆಯಿಂದ ಹೇಳುತ್ತಿದ್ದೇನೆ ನನಗೆ ಯಾವುದು ಇಷ್ಟ, ಯಾವುದು ಇಷ್ಟವಿಲ್ಲ ಅಂತ ನಿನಗೆ ಚೆನ್ನಾಗಿ ಗೊತ್ತಿದೆ. ಆದ್ದರಿಂದ ನನಗೆ ಇಷ್ಟವಾಗದ ವಿಷಯಗಳ ಬಗ್ಗೆ ಹೇಳ ಬೇಡ ಪ್ಲೀಸ್...

ಇದೇ ಅಂಶಗಳನ್ನು ಪ್ರತಿಯೊಬ್ಬ ಪ್ರೇಮಿ ಅನುಸರಿಸಿದ್ದೇ ಆದರೆ ಪ್ರೀತಿ ಮತ್ತಷ್ಟು ಗಟ್ಟಿಯಾಗಿ ಸಂಬಂಧಗಳು ಮಧುರವಾಗಿರುತ್ತದೆ. ನಮ್ಮ ಸಂಬಂಧ ಮತ್ತಷ್ಟು ಗಟ್ಟಿಯಾಗಲು ನಾವು ಏಕೆ ಬದಲಾಗಬಾರದು?

1 comment:

  1. TUMBA CHANNAGIDE...AND EE MAATU SATHYA......

    ReplyDelete