Thursday, May 24, 2012

ವಸಂತ ಮರುಕಳಿಸಿದಾಗ ಕಮರಿದ ಕನಸಿನ ನೆನಪೇಕೆ?


Should Not Live In The Memory Of Past Love Aid0202
ಪ್ರೀತಿಸಿದ ವ್ಯಕ್ತಿ ಬಾಳಸಂಗಾತಿಯಾಗಿ ಸಿಗಬಹುದು, ಸಿಗದೇ ಇರಬಹುದು. ಆದರೆ ಮೊದಲ ಲವ್ ಮರೆಯಲು ಯಾರಿಂದಲೂ ಸಾಧ್ಯವಿಲ್ಲ. ಹಾಗಂತ ಅದೇ ನೆನಪಿನಲ್ಲಿ ನಂತರದ ಸುಂದರವಾದ ಬದುಕನ್ನು ಕೈಯಾರೆ ಹಾಳು ಮಾಡುವುದು ಸರಿನಾ?

ನಾವು ಪ್ರೀತಿಸಿದ ಅಥವಾ ಮದುವೆಯಾಗುವ ವ್ಯಕ್ತಿ ಈ ಹಿಂದೆ ಯಾರನ್ನೊ ಪ್ರೀತಿಸಿ ಯಾವುದೊ ಕಾರಣಕ್ಕೆ ಅವರು ಒಂದಾಗದೆ ಹೋಗಿರಬಹುದು. ಶಿಶಿರದಲ್ಲಿ ಮರದಿಂದ ಎಲೆಗಳು ಉದುರಿ ವಸಂತದಲ್ಲಿ ಹೊಸ ಎಲೆ ಮತ್ತು ಹೂಗಳಿಂದ ಮರಗಳು ಕಂಗೊಳಿಸುತ್ತವೆ. ಅದೇ ರೀತಿ ನಮ್ಮ ಬದುಕಿನಲ್ಲಿ ಪುನಃ ಚಿಗುರಿದ ವಸಂತವನ್ನು ಹಾಳುಮಾಡುವುದು ದಡ್ಡತನದ ಪರಾಮಾವಧಿಯಲ್ಲದೆ ಮತ್ತೇನು?

ಇದ್ಹೇಕೆ ಹೇಳುತ್ತಿದ್ದೇನೆ ಅಂದರೆ ನನ್ನ ಗೆಳಯನ ಚಿಗುರು ಹೊಡೆಯ ಬೇಕಾದ ಪ್ರೇಮ ಮೊಗ್ಗಿನಲ್ಲಿಯೆ ಬಾಡಿ ಹೋಯಿತು. ಅವನು ಮಾಡಿದಿಷ್ಟೆ, ಅವನಿಗೆ ಈ ಹಿಂದೆ ಒಂದು ಹುಡುಗಿಯ ಜೊತೆ ಪ್ರೀತಿ ಇದೆಯೆಂದು ಹೇಳಿದ. ಇವನನ್ನು ತುಂಬಾ ಪ್ರೀತಿಸುತ್ತಿದ್ದ ಈ ಹುಡುಗಿ ಅದೆಲ್ಲಾ ಕಳೆದು ಹೋದ ಕತೆ ಇನ್ನು ಮುಂದೆ ನಮ್ಮ ಬದುಕಿನ ಬಗ್ಗೆ ಕನಸು ಕಾಣೋಣ ಅಂದಳು. ಆದರೆ ಈ ಮಾರಾಯನಿಗೆ ಯಾವತ್ತು ನೋಡಿದರೂ ದೂರ ಹೋದವಳದ್ದೇ ಗುಣಗಾನ. ಇವಳು ಏನೇ ಪ್ರೀತಿಯಿಂದ ಹೇಳಿದರೂ ಅವಳು ಹಾಗೆ ಹೇಳಿದ್ದಳು, ಹೀಗೆ ಹೇಳುತ್ತಿದ್ದಳು ಅಂತ ಶುರು ಹಚ್ಚಿಕೊಳ್ಳುತ್ತಿದ್ದ.

ಕಳೆದು ಹೋದ ಪ್ರೀತಿಯ ಕನವರಿಕೆಯಲ್ಲಿ ಎದುರಿನಲ್ಲಿರುವ ಪ್ರೀತಿಯ ಹುಡುಗಿಯ ಪ್ರೀತಿಯ ಆಳವನ್ನು ಅರೆಯದೆ ಹೋದ. ಅವಳೂ ಅವನ ಬಿಟ್ಟು ಬಹು ದೂರ ಹೋದಳು. ನನಗೆ ಅವಳ ಬಗ್ಗೆ ಕೋಪ ಬಂತು. ಆದರೆ ಒಮ್ಮೆ ಅವಳು ಸಿಕ್ಕದಾಗ ಹೇಳಿದಳು. ನಾನು ಮುಂದೆ ಬಾಳಬೇಕಾದ ಜೀವನದ ಬಗ್ಗೆ ಕನಸು ಕಾಣುತ್ತಿದ್ದೆ, ಆದರೆ ಅವನು ಗತಕಾಲದ ಕನಸಿನಲ್ಲಿದ್ದೆ. ನನಗೆ ನನ್ನ ಕನಸು ಕಮರಿಹೋಗುವುದು ಇಷ್ಟವಿಲ್ಲ ಎಂದಳು!

ನಮ್ಮ ಬಾಳ ಸಂಗಾತಿಗೆ ಜೊತೆ ಸಂತೋಷವಾಗಿ ಇರುವ ಸಮಯದಲ್ಲಿ ಅವಳ /ಅವನ ವಸ್ತುಗಳನ್ನು ನೆನಪಿನ ಕಾಣಿಕೆಯೆಂಬಂತೆ ಇಟ್ಟುಕೊಳ್ಳುವುದು ಅಥವಾ ಅವರ ಮಾಜಿ ಪ್ರೇಮಿಯ ಬಗ್ಗೆ ಮಾತನಾಡುವುದು ಯಾರಿಗೂ ಇಷ್ಟವಾಗುವುದಿಲ್ಲ.

ಮದುವೆಯಾದ ನಂತರ ನಿಮ್ಮ ಹೆಂಡತಿ/ ಗಂಡ ಅತಿ ಪ್ರೀತಿ ತೋರಿಸುವಾಗ ಕಮರಿಹೋದ ಪ್ರೀತಿಯ ಹುಡುಕಾಟದಲ್ಲಿ ನೀವಿದ್ದರೆ ನಿಮ್ಮ ಈ ಸಂಬಂಧ ಕೂಡ ದುರ್ಬಲವಾಗುವುದು.

No comments:

Post a Comment