Thursday, August 23, 2012

ನಿನ್ನದೇ ನೆನಪು

ನಿನ್ನದೇ ನೆನಪು ನಿನ್ನದೇ ಕನಸು 
ನಿನ್ನದೇ ಬಿಂಬ ಕಣ್ಣ ತುಂಬಾ 

ನೀ ಛಿದ್ರ ಮಾಡಿ ಹೋದ ಮನವೆಂಬ ಕನ್ನಡಿಯಲ್ಲಿ 
ಎಲ್ಲಿ ನೋಡಿದರು ನಿನ್ನದೇ ಬಿಂಬ 

ಎಷ್ಟು ಚಿಂತಿಸದರೇನು ಬಂತು 
ಬರುವವళಲ್ಲ ನೀ ಮತ್ತೆ ತಿರುಗಿ ನನ್ನ ಬಾಳಲಿ 

ನಿಜವ ಒಪ್ಪಲಾರದ ಮನವಾಯ್ತು ಕಲ್ಲು 
ನಿನ್ನದೇ ನೆನಪಲ್ಲಿ ಮರುಗಿ 

ಕಲ್ಲು ಬಂಡೆಯಾಗಿರುವ ಮನಕೆ ಬೇಕಿರುವುದು ಕೇವಲ ನಿನ್ನ ಸಹಾನುಭೂತಿಯಲ್ಲ
ಮತ್ತೇನೂ ಕೇಳಲಾರೆ ಒಂದೇ ಒಂದನು ಕೇಳುವೆ

ನಿನ್ನ ಮುದ್ದಾದ ಮನಸ್ಸಿನ ಪ್ರೀತಿ ನನ್ನ ಮೇಲಿರಲಿ ಕೊನೆವರೆಗೂ.............ఆర్య... !