ಇವನು ನನ್ನ ಪ್ರೀತಿಗೆ ಮೋಸ ಮಾಡಬಹುದೇ?

ನಿಮ್ಮ ಹುಡುಗ ನಿಮ್ಮನ್ನು ತುಂಬಾ ಪ್ರೀತಿಸುತ್ತಿದ್ದು, ನಿಮ್ಮನ್ನೇ ಮದುವೆಯಾಗಬೇಕೆಂದು ಬಯಸುತ್ತಿದ್ದರೆ ಅದನ್ನು ಅವನ ನಡುವಳಿಕೆಯಲ್ಲಿ ಕಂಡು ಹಿಡಿಯಬಹುದು. ನಿಮ್ಮ ಹುಡುಗ ಈ ಕೆಳಗಿನಂತೆ ವರ್ತಿಸುತ್ತಿದ್ದರೆ ಅವನು ನಿಮಗೆ ಮೋಸ ಮಾಡಲ್ಲ ಅಂತ ಧೈರ್ಯ ತಂದುಕೊಳ್ಳಬಹುದು.
1.ಗಂಡನ ರೀತಿ ನಡೆದುಕೊಳ್ಳುತ್ತಾನೆ: ಗಂಡನ ರೀತಿ ವರ್ತಿಸಲಾರಂಭಿಸಿದ ಅಂದರೆ ನಿಮ್ಮ ಬಗ್ಗೆ ತುಂಬಾ ಪೊಸೆಸಿವ್ ಆಗುತ್ತಾನೆ. ನಿಮ್ಮ ಬಗ್ಗೆ ತುಂಬಾ ಕಾಳಜಿ ತೋರಿಸುತ್ತಾನೆ. ನಿಮ್ಮ ಫ್ರೆಂಡ್ಸ್ ಅಥವಾ ಆಫೀಸ್ ನಲ್ಲಿ ಜೊತೆಯಲ್ಲಿ ಕೆಲಸ ಮಾಡುವವರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಪ್ರಯತ್ನಿಸುತ್ತಾನೆ. ನಿಮ್ಮ ಚಟುವಟಿಕೆಗಳ ಬಗ್ಗೆ ಗಮನ ಇಟ್ಟಿರುತ್ತಾನೆ. ತನ್ನ ಬಾಳ ಸಂಗಾತಿ ಆಯ್ಕೆ ಬಗ್ಗೆ ಗಂಡಸರು ಹೆಚ್ಚು ಜಾಗೃತಿ ವಹಿಸುತ್ತಾರೆ.
2. ಮುಖ್ಯವಾದ ದಿನಗಳನ್ನು ನೆನಪಿನಲ್ಲಿಟ್ಟು ಕೊಂಡಿರುತ್ತಾನೆ:ನಿಮಗೆ ಮೊದಲು ಪ್ರಪೋಸ್ ಮಾಡಿದ ದಿನ, ನೀವು ಇಬ್ಬರು ಮೊದಲು ಸಿನಿಮಾಕ್ಕೆ ಹೋದ ನೆನಪಿಡದಿದ್ದರೂ, ಒಂದು ವೇಳೆ ಹುಷಾರಿಲ್ಲದಿದ್ದರೆ ಡಾಕ್ಷರ್ ಚಿಕಿತ್ಸೆಗೆ ಬರಲಿಕ್ಕೆ ಹೇಳಿದ ದಿನ, ಸಂದರ್ಶನಕ್ಕೆ ಹೋಗಬೇಕಾದ ದಿನ, ನಿಮ್ಮ ತಿಂಗಳ ದಿನ ಹೀಗೆ ಮುಖ್ಯವಾದ ದಿನಗಳನ್ನು ನೆನಪಿನಲ್ಲಿಟ್ಟುಕೊಂಡಿರುತ್ತಾರೆ.
3. ಭಾವನೆಗಳನ್ನು ಅಭಿವ್ಯಕ್ತಿ ಮತ್ತು ಆರೈಕೆ: ಅವನಿಗೆ ಇಷ್ಟವಾದರೆ, ಬೇಜಾರಾದರೆ ಪ್ರತಿಯೊಂದನ್ನು ನಿಮಗೆ ಹೇಳಿಕೊಳ್ಳವುದು, ನಿಮ್ಮ ಭಾವನೆಗಳಿಗೆ ಬೆಲೆ ಕೊಡುವುದು, ನಿಮ್ಮ ಬೇಕು ಬೇಡಗಳನ್ನು ಗಮನಿಸುವುದು ಮಾಡುತ್ತಿದ್ದರೆ ಅವರು ನಿಮ್ಮನ್ನು ಬಾಳಸಂಗಾತಿಯಾಗಿ ಬಯಸುತ್ತಿದ್ದಾರೆ ಎಂದು ಅರ್ಥ.
4. ಯಾವುದೇ ವಿಷಯವನ್ನು ಬಚ್ಚಿಟ್ಟುಕೊಳ್ಳದಿರುವುದು: ನಿಮ್ಮ ಜೊತೆಯ ಸಂಬಂಧವನ್ನು ಮನೆಯವರ ಗೆಳೆಯರ ಹತ್ತಿರ ಬಚ್ಚಿಡಲು ಪ್ರಯತ್ನಿಸದಿರುವುದು, ನಿಮ್ಮನ್ನು ಇಷ್ಟ ಪಡುತ್ತಿರುವ ವಿಷಯವನ್ನು ಮನೆಯಲ್ಲಿ ಹೇಳುವುದು, ನಿಮಗೆ ಅವರ ಮನೆಯವರ ಬಗ್ಗೆ, ಮನೆ ಬಗ್ಗೆ ಪ್ರತಿಯೊಂದು ವಿಷಯವನ್ನು ಹೇಳುವುದು ಮಾಡುತ್ತಿದ್ದರೆ ಅವರು ನಿಮ್ಮನ್ನು ಅವರ ಮನೆಯ ಸದಸ್ಯರಾಗಲು ಬಯಸುತ್ತಿದ್ದರೆ ಎಂಬುದು ವ್ಯಕ್ತವಾಗುತ್ತದೆ.
5. ನಿಮ್ಮ ಕರೆಯನ್ನು ಎಲ್ಲಾ ಸಮಯದಲ್ಲಿ ಸ್ವೀಕರಿಸುವುದು: ಕೆಲವೊಂದು ಮುಖ್ಯವಾದ ಸಮಯದಲ್ಲಿ ಬಿಟ್ಟರೆ ನೀವು ಕರೆ ಮಾಡಿದಾಗ ನಿಮ್ಮ ಕರೆಯನ್ನು ಸ್ವೀಕರಿಸುತ್ತಿದ್ದರೆ ಅಥವಾ ನಿಮ್ಮ ಕರೆಯನ್ನು ಮನೆಯವರ, ಗೆಳೆಯರ ಮುಂದೆ ಸ್ವೀಕರಿಸುವ ಧೈರ್ಯ ತೋರಿಸುತ್ತಿದ್ದಾರೆ ಎಂದರೆ ಅವರು ನಿಮಗೆ ಮೋಸ ಮಾಡುವುದದಿಲ್ಲ ಎಂಬ ಧೈರ್ಯ ತಾಳಬಹುದು.
6. ನಿಮ್ಮ ನಿರ್ಧಾರಗಳಲ್ಲಿ ಭಾಗಿಯಾಗುವುದು: ನಿಮ್ಮ ದೃಷ್ಟಿಕೋನ, ನಿಮ್ಮ ನಿರ್ಧಾರಗಳಲ್ಲಿ ಭಾಗಿಯಾಗುವುದು, ನಿಮ್ಮ ನಿರ್ಧಾರ ಸರಿಯಿಲ್ಲದಿದ್ದರೆ ಅದನ್ನು ಎತ್ತಿ ತೋರಿಸುವ ಪ್ರಯತ್ನ ಮಾಡಿದರೆ ಅವರು ನಿಮ್ಮ ಬಗ್ಗೆ ತುಂಬಾ ಕಾಳಜಿ ಹೊಂದಿದ್ದಾರೆ ಎಂದು ಸಂತೋಷ ಪಡಿ.
7. ನಿಮ್ಮ ಭಾವನೆ ಮತ್ತು ಮನೆಯವರ ಬಗ್ಗೆ ಗೌರವ ಕೊಡುವುದು: ನಿಮ್ಮ ಇಷ್ಟ-ಕಷ್ಟಗಳನ್ನು ತಿಳಿದುಕೊಂಡು ಅದರಂತೆ ನಡೆಯಲು ಪ್ರಯತ್ನಿಸುವುದು, ನಿಮ್ಮ ಭಾವನೆಗಳಿಗೆ ಬೆಲೆ ಕೊಡುವುದು, ನಿಮ್ಮ ಮನೆಯವರ ಬಗ್ಗೆ ತಿಳಿದುಕೊಳ್ಳುವುದು ಮತ್ತು ಗೌರವವನ್ನು ನೀಡುತ್ತಿದ್ದರೆ ನಿಮ್ಮ ಪ್ರೇಮಿ ನಿಮಗೆ ಮೋಸ ಮಾಡುವ ಚಿಂತೆ ಕೂಡ ಮಾಡುವುದಿಲ್ಲವೆಂದು ದೃಢವಾಗಿ ಹೇಳಬಹುದು.
ಪ್ರೀತಿಸುತ್ತಿದ್ದೇನೆ ಎಂದು ಒಬ್ಬ ಹುಡುಗ ಹೇಳಿದರೆ ಅವನನ್ನು ಪುರ್ತಿಯಾಗಿ ನಂಬಿ ಮೋಸ ಹೋಗುವ ಬದಲು ಅವನು ನಿಜವಾಗಲೂ ನಿಮ್ಮಪ್ರೀತಿಗೆ ಅರ್ಹನೇ ಅನ್ನುವುದನ್ನು ಪರೀಕ್ಷಿಸಿ, ಅವನ ಮತ್ತು ಅವನ ಮನೆಯವರ ಹಿನ್ನಲೆ ತಿಳಿದುಕೊಳ್ಳಲು ಪ್ರಯತ್ನಿಸಿ, ಆಗ ಮೋಸ ಹೋಗುವುದನ್ನು ತಪ್ಪಿಸಬಹುದು.
No comments:
Post a Comment