Friday, March 30, 2012

ಓ.... ಮನಸೇ

.... ಮನಸೇ ನಿನ್ನ ಅರಿಯದ ಮನಸ್ಸಿಗೆ, ನೀ ಏಕೆ ಸೋಲುವೆ
ನಿನಗನಿಸಿದ್ದೆಲ್ಲ ನನ್ನಿಂದ ಮಾಡಿಸುವೆ
ನೀ ಏಕೆ ಹೀಗೆ ?

ಬಿಟ್ಟು ಬಿಡು ನನ್ನ
ಭಾವನೆಗಳ ಜೊತೆ ಆಟ ಆಡಿ
ಪ್ರೀತಿ ಎಂಬ ಅಪರಾಧ ಮಾಡಿಸಿ
ಭಗ್ನ ಪ್ರೇಮಿ ಎಂಬ ಬಿರುದು ಕೊಟ್ಟು
ಯಾವುದೋ ಮೂಲೆಯಲ್ಲಿ ಅವಿತು ನಗುತ್ತಿರುವೆಯಾ ?

ನಗು....ನಗು.....ಆದರೆ
ನನ್ನದೊಂದು ಮನವಿ
ನಿನಗೂ ಒಂದು ಒಳ ಮನಸ್ಸಿದೆಯಲ್ಲ
ಕೇಳು ಒಮ್ಮೆ ಆ ಮನಸ್ಸನ್ನು
ನೀ ...ಮಾಡಿದ್ದು ಸರಿಯಾ.....?
                           
                                  ఆర్య

1 comment: