Wednesday, March 28, 2012

ನೀ ಅರಿತು ಬರುವತನಕ

ಮನಸಲ್ಲಿ ಬಂದಿಸಿದ ಪ್ರೀತಿಯು
ನೆನಪಾಗಿ ಮರುಕಳಿಸಿತ್ತು

ಕಣ್ಣ ಕನಸುಗಳೆಲ್ಲಾ ನೀರಾಗಿ ಹರಿವುತಿದೆ
ಹೃದಯವೂ ಹಟ ಮಾಡಿತ್ತು

ಮರೆತು ಬಿಡು ಎಂದರೆ ಮಡಿವೆ ಎಂದಿದೆ
ಮನಸಿನ ಮಾತು ನಾ ಕೇಳಲಾಗದೆ

ನನ್ನ ನೋವು ಮನಸು ಅರಿಯಲಾರದೇ
ಮೌನವಾದೆ ಯಾರಿಗೂ ನಾ ಹೇಳಲಾಗದೇ..

ನಾ ತಂದ ಕಾಣಿಕೆ ನಿನಗೆ ನೀಡಲು
ನೀ ಬರುವೆ ಎಂದು ದಿನವೆಲ್ಲ ನಾ ಕಾದೆ..

ಬಾರದ ಕಾರಣ ಕೂಡ ನನಗೆ ಗೊತ್ತು
ಆದರೂ ಕಾದಿದ್ದೆ…. ನಾ ನಿನ್ನ ಮರೆಯುವತನಕ
ಇಲ್ಲವೇ ನನ್ನ ಮರೆಯಲಾರೆ ಎಂದು ನೀ ಅರಿತು ಬರುವತನಕ

                                                                                                                                        ఆర్య

No comments:

Post a Comment