Tuesday, March 27, 2012

ಅವಳು ಯಾರೆಂದು…

ಅವಳು ಯಾರೆಂದು ಗೊತ್ತಿಲ್ಲ..!

ಆದರೆ ಅವಳ ಹೆಜ್ಜೆ  ಗುರುತಿಸಬಲ್ಲೆ..!

ಅಂದು ಅವಳು  ನನ್ನ ಹೃದಯದ

ಕದ ತಟ್ಟಿದಾಗ ಹುಮ್ಮಸ್ಸಿನಿಂದ ತೆರೆದೆ..!

ಅಡಿ ಇಟ್ಟಳು  ಅವಳು..!

ಹೆಜ್ಜೆ ಗುರುತುಗಳು ಅಳಿಸದಂತೆ

ಕಾಳಜಿವಹಿಸಿದ್ದೇನೆ..!!

ಕೋಟಿ-ಕೋಟಿ ಕನಸುಗಳ

ರಾಶಿಯನ್ನೇ ಶೇಖರಿಸಿ ಇಟ್ಟಿದ್ದೆ..!

ಕೂಡುವ ಆಸನ..!

ಮಲಗುವ ಮಂಚ..!

ತೂಗುಬಿಟ್ಟ ಗಿಳಿ..!

ಎಲ್ಲೆಂದರಲ್ಲಿ

ಜತನವಾಗಿ ಕಾಯ್ದು ಇಟ್ಟಿದ್ದ

ಕನಸು ಕನವರಿಕೆಗಳು

ಮಾಯವಾಗಿವೆ

ಅವಳ ಜೊತೆ..!!



ಅವಳು ಯಾರೆಂದು…

                                              ಆర్య


No comments:

Post a Comment